KKNC 2025
ಚಿತ್ರ ವಸಂತ - ಚಿತ್ರ ರಚನಾ ಸ್ಪರ್ಧೆ
ನಿಸರ್ಗದ ಮಡಿಲಲ್ಲಿ ಕರ್ನಾಟಕದ ಜೀವನ ಶೈಲಿ, ಪ್ರಾಕೃತಿಕ ಸೊಬಗನ್ನು ಕುರಿತು ಚಿತ್ರ ರಚನೆಗೆ ಆಹ್ವಾನ. ಬನ್ನಿ, ಭಾಗವಹಿಸಿ, ಸಂಭ್ರಮಿಸಿ!
Calling artists of all ages to showcase their creativity and reconnect with our roots through art!
Register Now!
- Coloring (Ages 5 and below): Printed design provided by KKNC. Drawing will be sent to registered kids a few days before the event.
- Wildlife of Karnataka (National Parks of Karnataka) (Ages 6–8)
- Performing Arts of Karnataka (e.g., Kamsaale, Dollu Kunita, Yakshagana, Huli Vesha, and more) (Ages 9–11)
- Traditional Lifestyle of Karnataka (Ages 12–15)
- Celebration of Women (Ages 16 and up, including adults)
-
Materials:
- Paper Size: 11x14 Multi-media paper, provided by KKNC
- Medium: Any (please bring your own supplies)
- Time: 3 hours, starting at 12:00 PM
ಸ್ವರ ಸಂಜೀವಿನಿ, ಮಾರ್ಚ್ 29, 2025
KKNC SSCF Presents
Giving back to our community is a shared responsibility, and it's truly inspiring to see a young person, who has grown up before our very eyes, generously donating his own earnings to such a wonderful cause. If his heartfelt gesture moves you, we invite you to join us in supporting SSCF. Come and experience the musical brilliance of the Raaga team "SWARA SANJEEVINI" in a spectacular evening of giving.
ಸ್ಥಳೀಯ ಕಾರ್ಯಕ್ರಮಗಳಿಗೆ ಆಹ್ವಾನ
ಕನ್ನಡ ಕೂಟದ ಯುಗಾದಿ ಕಾರ್ಯಕ್ರಮವನ್ನು ಏಪ್ರಿಲ್ 12, 2025ರಂದು Vasona Park ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಧಾನ ವಸ್ತು "ಹಸಿರೇ ಉಸಿರು". ಇದಕ್ಕೆ ಅನುಗುಣವಾಗಿ ನಿಮಗೆ ಕಾರ್ಯಕ್ರಮವನ್ನು ನಿರ್ದೇಶಿಸಲು ಆಸಕ್ತಿಯಿದ್ದಲ್ಲಿ ಇಂದೇ ನೋಂದಾಯಿಸಿಕೊಳ್ಳಿ. ಕೊನೆಯ ದಿನಾಂಕ ಮಾರ್ಚ್ 20, 2025.
https://forms.gle/jPGExGP4gB5B9EZo6
Please join us in celebrating Yugadi with us on April 12, 2025 at Vasona Park. The main theme of this event is "ಹಸಿರೇ ಉಸಿರು". If you are interested in directing the programs, please register using the link below. Last date to register: March 20, 2025.
https://forms.gle/jPGExGP4gB5B9EZo6
ಸ್ವರ ಸಂಜೀವಿನಿ ೨೦೨೫
Block your Calendar for Yugadi!
"ಹೊಸ ವರ್ಷದ ಹೊಸ ಕನಸು, ಹೊಸ ಹಂಬಲ ಹೊಸ ನಗು, ಯುಗಾದಿ ಉತ್ಸವದಲ್ಲಿ ತುಂಬಲಿ ಸುಖ ಸಂತೋಷವು!"
Come for the culture, stay for the feast… and dance your way home!!!
We’re excited to invite you to the KKNC Ugadi Celebration on April 12, 2025, at Vasona Park! Get ready for a day filled with vibrant cultural programs, festive celebrations, and much more.
Stay tuned for more details—mark your calendars and join us for an unforgettable Ugadi celebration!
#kknc #kknc2025 #kkncugadi #ugadi2025 #kkncugadi2025 #kannadakootausa #kannadakootaofnortherncalifornia #UgadiCelebration
#KannadaCulture #CelebrateUgadi
ಕನ್ನಡ ಕೂಟದ "ಸ್ತ್ರೀ ಶಕ್ತಿ" ೨೦೨೫ ರ ಉದ್ಘಾಟನಾ ಸಮಾರಂಭ
ಫೆಬ್ರವರಿ 28ರಂದು ನಡೆದ "ಸ್ತ್ರೀ ಶಕ್ತಿ" 2025ರ ಮೊದಲ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂತು. "ವೃತ್ತಿ ಜೀವನವನ್ನು ರೂಪಿಸುವಲ್ಲಿ ನಮ್ಮ ಸಂಸ್ಕೃತಿಯ ಪ್ರಭಾವ" ಎನ್ನುವ ವಿಷಯವನ್ನು ಕುರಿತು, ತಮ್ಮ ಅಮೂಲ್ಯವಾದ ಜೀವನಾನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡ ಭಾಷಣಕಾರರು ಮತ್ತು ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಶಿಸ್ತು, ಪರಿಶ್ರಮ, ಶಿಕ್ಷಣ, ನಮ್ಮದೇ ಆದ ಜೊತೆಗೆ ಹೊಸದೊಂದು ಸಂಸ್ಕೃತಿಯೊಂದಿಗೆ ಬೆರೆಯುವಿಕೆ, ಸಮುದಾಯಗಳ ಸಾರಥ್ಯ ಮತ್ತು ಸೇವೆ, ತಂದೆ-ತಾಯಿ/ಹಿರಿಯರ ಪಾಲನೆ ಹೀಗೆ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಭಾಷಣಕಾರರು:
ಕಲಾ ಘಾಟಿ - ಚಿತ್ರಕಲೆ ಮತ್ತು ಶಿಕ್ಷಣ
ಶರ್ಮಿಳಾ ವಿದ್ಯಾಧರ - ಸಮುದಾಯಗಳ ನಾಯಕತ್ವ ಮತ್ತು ಐಟಿ
ಮಾತಾ ತಲ್ಲಮ್ - ಕನ್ನಡ ಕೂಟದ ಇತಿಹಾಸ - ಅಂದು-ಇಂದು
ಸವಿತಾ ಹೊಸಕೋಟೆ - ಸ್ಟಾರ್ಟ್-ಅಪ್ ಮತ್ತು ವಾಣಿಜ್ಯೋದ್ಯಮ
ವಿದ್ಯಾಲತಾ ಜೀರಿಗೆ - ಪ್ರದರ್ಶನ ಕಲೆಗಳು
ಸ್ಮಿತಾ - Security Tech ಮತ್ತು ಹಿರಿಯರ ಸೇವೆ
ವಸುಧಾ ಹೆಗಡೆ - ಸಾಹಿತ್ಯ ಮತ್ತು ಐಟಿ
ಮೋನಿಕಾ ವೆಂಕಟೇಶಮೂರ್ತಿ - ಎಂಜಿನೀಯರಿಂಗ್ ಮತ್ತು ಸಮುದಾಯಗಳ ಸೇವೆ
ಕಾರ್ಯಕ್ರಮ ಸುಗಮವಾಗಿ ಸಾಗಲು ಸಹಾಯ ಮಾಡಿದ ಸ್ವಯಂಸೇವಕರಾದ ಕುಂಜು, ಐಶ್ವರ್ಯ, ವೇದ, ಲಕ್ಷ್ಮಿ ಮತ್ತು ಪದ್ಮಿನಿಯವರಿಗೆ ಧನ್ಯವಾದಗಳು. 2025ರ ಪ್ರಧಾನ ವಸ್ತು "ಬೇರು-ಸೇರು"ವಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪಿಸಿ, ಸಮರ್ಪಕವಾಗಿ ಮುನ್ನೆಡೆಸಿದ ಮೋನಿಕಾ ವೆಂಕಟೇಶಮೂರ್ತಿಯವರಿಗೆ ವಿಶೇಷ ಕೃತಜ್ಞತೆಗಳು.
ಮತ್ತೆ ಮಾರ್ಚ್ 28ರ ಮುಂದಿನ ಸಮಾವೇಶದಲ್ಲಿ ಭೇಟಿಯಾಗೋಣ!
KKNC Women’s Forum, Shakthi 2025 Kickoff
The *Shakthi 2025 Kickoff* on *February 28th* was a resounding success, thanks to our enthusiastic attendees and inspiring speakers! The evening explored how Roots and Culture shape professional journeys, with insights spanning *discipline, perseverance, adaptability to a new culture, education, compassion for geriatric care, and community leadership & service*.
Esteemed Speakers
- *Kala Ghaty* – Arts & Education
- *Sharmila Vidyadhara* – Community Leadership & IT
- *Matha Tallam* – Then & Now – A Quick Recap
- *Savitha Hoskote* – Startups & Entrepreneurship
- *Vidyalatha Jeerige* – Performing Arts
- *Smitha* – Security Tech & Geriatric Care
- *Vasudha Hegde* – Literature & IT
- *Monika Venkateshmurthy* – Engineering & Community Service
A huge thanks to our incredible volunteers—Kunju, Aishwarya, Veda, Lakshmi, & Padmini—for making the event seamless and engaging, and special gratitude to *Monika Venkateshmurthy* for her vision and leadership in orchestrating a memorable kickoff to beautifully align with this year’s KKNC theme, "connecting to our roots".
*See you all at our next gathering on March 28th!*
ಗಾನ ಅಷ್ಟಮಿ
ಸಂಚಿಕೆ ೨
ಫೆಬ್ರವರಿ ವಿಷಯ: ಪ್ರೇಮ ಗೀತೆ / ಮದುವೆ ಹಾಡುಗಳು
ಗಾನ ಅಷ್ಟಮಿಯ ಎರಡನೆಯ ಸಂಚಿಕೆಗೆ ಒಂದು ಮಧುರವಾದ ಪ್ರೇಮ ಗೀತೆಯನ್ನು ಪ್ರಸ್ತುತಪಡಿಸುತ್ತಿರುವವರು ಅಮೂಲ್ಯ.
"ಗುನಾ" ಎಂಬ 1991ರ ತಮಿಳು ಚಿತ್ರದ "ಕಣ್ಮಣಿ" ಗೀತೆಯ ಕನ್ನಡ ಅನುವಾದವನ್ನು ಶಾಲಿನಿ ಎಸ್. ಆರ್. ಮಾಡಿದ್ದಾರೆ. ಸಂಗೀತ ಸಂಯೋಜನೆ ಇಳೆಯರಾಜ ಅವರದ್ದು.
ಸಂಚಿಕೆ ೩
ಮಾರ್ಚ್ ವಿಷಯ: ದಾಸರ ಪದಗಳು
ಗಾನ ಅಷ್ಟಮಿಯ ೩ನೆಯ ಸಂಚಿಕೆಯಲ್ಲಿ ಪುರಂದರದಾಸರ ಸುಪ್ರಸಿದ್ಧ ಉಗಾಭೋಗಗಳಲ್ಲಿ ಒಂದಾದ "ತಂಬೂರಿ ಮೀಟಿದವ" ಪದವನ್ನು ಇಂಪಾಗಿ ಹಾಡಿದವರು ಶಾರದ ಸಮೀರ್.
ರಾಗ: ಸಿಂಧುಭೈರವಿ
ತಾಳ: ಆದಿ
ಭಾವ ಸಂಗಮ
ವನಸುಮದೊಲೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸೋ ಗುರುವೆ ಹೇ ದೇವ
ಶುಭ ನುಡಿ ಶುಭ ನುಡಿ... ಶುಭ ನುಡಿಯೇ ಶಕುನದ ಹಕ್ಕಿ |
ಶುಭ ನುಡಿಯೇ ಶುಭ ನುಡಿಯೇ
ಸ್ನೇಹಿತರೇ, ಮೇಲಿನ ಗೀತೆಗಳ ಜೊತೆಗೆ ಇನ್ನೂ ಅನೇಕ ಸುಮಧುರ ಭಾವಗೀತೆಗಳನ್ನು ಕೇಳಿ ಬೆಳೆದ ಕನ್ನಡಿಗರಾದ ನಾವು, ಹಿಂದೆ ಕಲಿತ, ಈಗ ಮರೆತ ಹಾಡುಗಳನ್ನು ಮತ್ತೊಮ್ಮೆ ಕಲಿತು, ನಮ್ಮ ಮಕ್ಕಳಿಗೂ ಕಲಿಸಿ ಸುಗಮ ಸಂಗೀತ ಪರಂಪರೆಯನ್ನು ಪೋಷಿಸೋಣ. ಆಸಕ್ತಿಯಿದ್ದಲ್ಲಿ ನೋಂದಾಯಿಸಿಕೊಳ್ಳಿ.
Please register for Kannada choir. Registrations open for all KKNC members and their kids aged 10 years and above.
https://forms.gle/2sVk4g57FTywUhFC9
ನಿರ್ದೇಶಕರಿಗೆ ಅಹ್ವಾನ
ಕೇಳ್ರಪ್ಪೋ ಕೇಳ್ರಿ, ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ಮಾಡ್ತಾರಂತೆ. ನಾಟಕವನ್ನು ಮಾಡಿಸಲು ನಿರ್ದೇಶಕರನ್ನು ಹುಡುಕುತ್ತಿದ್ದಾರಂತೆ. ನಿಮಗೆ ನಾಟಕವನ್ನು ನಿರ್ದೇಶಿಸಲು ಆಸಕ್ತಿಯಿದ್ದಲ್ಲಿ ಇಂದೇ ನೋಂದಾಯಿಸಿಕೊಳ್ಳಿ. ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಫೆಬ್ರವರಿ 17, 2025.
If you are interested in directing a street play in the upcoming Ugadi event on April 12, please register using this link: https://forms.gle/J5S9zGFx2455wNPX9
ಕಲಾ ನವಮಿ
ಸಂಚಿಕೆ ೧
ಜನವರಿ ವಿಷಯ: ಜಾನಪದ/ಸೂರ್ಯ
ಸೂರ್ಯನ ಕುರಿತಾಗಿ ರಾಮಪ್ರಸಾದ್ ಅವರು ರಚಿಸಿ, ಸ್ವಾತಿಯ ಜೊತೆಗೂಡಿ ಹಾಡಿದ ತ್ರಿಪದಿಗಳಿಗೆ ಮೈತ್ರಿ ಹೆಗಡೆಯವರು ಅತಿ ಸುಂದರ ಸೂರ್ಯೋದಯದ ವರ್ಣಚಿತ್ರವನ್ನು ರಚಿಸಿದ್ದಾರೆ.
18x24 Canvas
ಮಾಧ್ಯಮ: Acrylics
ಸಂಚಿಕೆ ೨
ಫೆಬ್ರವರಿ ವಿಷಯ: ಪ್ರೇಮಗೀತೆ
ಮದುವೆಯ ಶುಭ ಸಂದರ್ಭದಲ್ಲಿ ವಧೂ-ವರರ ಕೈ ಕಾಲುಗಳ ಮೇಲೆ ಅರಳುವ ವಿಶಿಷ್ಟ ಕಲೆ "ಮದರಂಗಿ". ಅಂಗೈ, ಮುಂಗೈಗಳ ಸಿಂಗಾರದೊಂದಿಗೆ ಪ್ರೀತಿಯ ಸಂಕೇತವಾಗಿಯೂ ಬೆಳೆಯುತ್ತಾ ಬಂದಿದೆ. ಮದರಂಗಿಯ ರಂಗಲ್ಲಿ ಮದುಮಕ್ಕಳ ಮಧ್ಯೆ ಅನುರಾಗ ಹೆಚ್ಚುತ್ತದೆ ಎಂಬ ನಂಬಿಕೆಯೂ ಸೇರಿದೆ.
೨ ವಾರಗಳ ಹಿಂದೆ ಅಮೂಲ್ಯಾ ಹಾಡಿದ ಪ್ರೇಮಗೀತೆಗೆ, ಕಲಾ ನವಮಿಯ ಎರಡನೆಯ ಸಂಚಿಕೆಯಲ್ಲಿ "ಅಂಗೈ ಮೆರುಗು" ಹೆಚ್ಚಿಸುವ ಮದರಂಗಿಯ ವಿವಿಧ ವಿನ್ಯಾಸಗಳನ್ನು ಬಿಡಿಸಿರುವವರು ಶಿಲ್ಪ ಬಾಲರಾಜ್.
ಪಾಕ-ಪೌರ್ಣಿಮೆ
ಸಂಚಿಕೆ ೧
ಕನ್ನಡ ಕೂಟದ ಸಾರಥ್ಯದ ಜೊತೆಯಲ್ಲಿಯೇ, ಸಾಂಪ್ರದಾಯಕ ಅಡುಗೆಗಳ ಹರಿಕಾರರಾಗಿ ಪಾಕ ಪೌರ್ಣಿಮೆಯ ಮೊದಲ ಸಂಚಿಕೆಯನ್ನು ಕನ್ನಡ ಕೂಟದ ಅಧ್ಯಕ್ಷೆ ವಸುಧಾ ಹೆಗಡೆಯವರು ಉದ್ಘಾಟಿಸುತ್ತಿದ್ದಾರೆ.
ಮಲೆನಾಡಿನ ಒಂದು ಸಾಂಪ್ರದಾಯಕ ಸಿಹಿ ತಿಂಡಿ "ಮನೋಹರ"ವನ್ನು ನಮ್ಮ ನಿಮ್ಮೆಲ್ಲರಿಗಾಗಿ ವಸುಧಾ ಅವರು ಮಾಡಿ ತೋರಿಸಿದ್ದಾರೆ. ನೀವೂ ಮಾಡಿ, ಹೇಗಿದೆ ಎಂದು ತಿಳಿಸಿ.
https://youtu.be/RWI9d0jaWxY
#kknc2025 #kkncsahityavedike
ಸಂಚಿಕೆ ೨
ಉತ್ತರ ಕರ್ನಾಟಕದ ಆಹಾರ ಪದ್ಧತಿ ಬಹಳ ವಿಶೇಷ ಮತ್ತು ರುಚಿಕರವಾದದ್ದು.
ಪಾಕ ಪೌರ್ಣಿಮೆಯ ಎರಡನೆಯ ಸಂಚಿಕೆಯಲ್ಲಿ ಉತ್ತರ ಕರ್ನಾಟಕದ ಒಂದು ಪದಾರ್ಥವನ್ನು ಮಂಜರಿ ಅವರು ತೋರಿಸಿಕೊಡುತ್ತಿದ್ದಾರೆ. ನೀವೂ ಮಾಡಿ, ಹೇಗಿದೆ ಎಂದು ತಿಳಿಸಿ.
ಅಕ್ಷರಗಳಲ್ಲಿ ಬರೆಯುವ, ಅಥವಾ ಮಾತಿನಲ್ಲಿ ಹೇಳುವ Thank You ಎನ್ನುವ ಪದ ನಮ್ಮ ಮನದ ಭಾವವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೂ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು!!
ಕನ್ನಡ ಕೂಟದ ಸಂಕ್ರಾಂತಿಯಲ್ಲಿ ಏನೆಲ್ಲಾ ಇದೆ… ಇಲ್ಲಿ ನೋಡಿ... ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ!!
Renew your membership
Purchase food at discounted rates
ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು!!
ಕನ್ನಡ ಕೂಟದ ಸಂಕ್ರಾಂತಿಯಲ್ಲಿ ಏನೆಲ್ಲಾ ಇದೆ… ಇಲ್ಲಿ ನೋಡಿ... ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ!!
Join the KKNC Family! Celebrate Culture, Embrace Community, and Stay Connected. Become a Member Today!
As we welcome the harvest season, we are thrilled to share our Sankranti celebrations with you!
Join us on Sunday, January 19, 2025, for an afternoon of joy, music, and festivities as we come together to celebrate the spirit of community, culture, and giving.
This festive season is also a time to reflect on those in need. Winter can be especially challenging for many, and a warm coat can make a world of difference. We kindly ask you to bring your gently used or new coats for donation. Your generosity will bring warmth and comfort to those who need it most.
We are incredibly proud of our children for their dedication to making a difference. Let us come together to celebrate their efforts, support this meaningful cause, and strengthen our community bonds.
ಕನ್ನಡ ಬಾಂಧವರೇ
ತಮಗಾಗೇ ವಿಶೇಷವಾಗಿ ಆಯ್ಕೆ ಮಾಡಲಾದ ದಕ್ಷಿಣ ಭಾರತೀಯ ಅಡುಗೆಗಳನ್ನು ಸವಿದು ಸಂಕ್ರಾಂತಿ ಹಬ್ಬವನ್ನು ಕನ್ನಡ ಸಮುದಾಯದ ಎಲ್ಲರೊಂದಿಗೆ ಸವಿಯಿರಿ. ತಮ್ಮ ಊಟವನ್ನು ಈಗಲೇ ಕಾಯ್ದಿರಿಸಿ!
ಊಟವನ್ನು ಇಲ್ಲಿ ಕಾಯ್ದಿರಿಸಿ:
https://www.swirepay.com/kknc2025
ಯಾವಾಗ: ಭಾನುವಾರ, ಜನವರಿ 19, 2025
ಎಲ್ಲಿ: ಗನ್ ಹೈಸ್ಕೂಲ್, Gunn High School, Spangenberg Theater, 780 Arastradero Road, Palo Alto, CA 94306
Google Maps Link
Mark Your Calendars for Sankranthi 2025!
Kannada Koota of Northern California is excited to invite you to a vibrant day-long cultural extravaganza on Sunday, January 19, 2025! Immerse yourself in mesmerizing performances by local and international artists, reconnect with the community, and savor the essence of Sankranthi with our specially curated South Indian festive menu!
Pre-Book your delicious meal today:
https://www.swirepay.com/kknc2025
When: Sunday, January 19, 2025
Where: Gunn High School, Spangenberg Theater, 780 Arastradero Road, Palo Alto, CA 94306
Google Maps Link
Don’t miss this cultural and culinary celebration. See you there!
ನಮ್ಮ ನಾಡಿನ ಭವ್ಯ-ದಿವ್ಯ ಇತಿಹಾಸವೆಂಬ ಮರದ, ಕಾವ್ಯವೆಂಬ ಶಾಖೆಯಲ್ಲಿ ಬಿಟ್ಟಿರುವ ಮೊದಲ ಫಲವೇ "ರಾಮಾಯಣ". ಸುಂದರ ಸಾರದ ರಾಮಾಯಣ ಕತೆಯನ್ನು ಹೇಳುವ-ಕೇಳುವ ಆಸೆಯನ್ನು ನಮ್ಮ ಮಕ್ಕಳಲ್ಲಿ ಚಿಗುರಿಸುವ ಮಹದಾಸೆಯನ್ನು ಹೊತ್ತಿದ್ದೇವೆ. ಇದು "ಬೇರು-ಸೇರು" ಪ್ರಧಾನ ವಸ್ತುವಿನ ಆಶಯ. ಕನ್ನಡ ಕೂಟದ ಪ್ರತಿ ಹಬ್ಬದಲ್ಲಿಯೂ ರಾಮಾಯಣದ ಒಂದು ಕಾಂಡವನ್ನು ನಾಟಕ ಮೂಲಕ ಪ್ರದರ್ಶಿಸಲು ಯೋಜಿಸಿದ್ದೇವೆ.
2025ರ ಮೊದಲ ಕಾರ್ಯಕ್ರಮದಲ್ಲಿ ರಾಮಾಯಣದ ಮೊದಲ ಕಾಂಡ “ಬಾಲಕಾಂಡ” ವನ್ನು ನಮ್ಮ ಪುಟಾಣಿಗಳ ಮಾತಲ್ಲಿ ಕೇಳಲು-ನೋಡಲು-ಆನಂದಿಸಲು ತಪ್ಪದೇ ಬನ್ನಿ - ಜನವರಿ 19, ಸಂಕ್ರಾಂತಿ ಹಬ್ಬಕ್ಕೆ!
ಬೇರು ಸೇರು - Connect to our roots
“ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ... ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ...." ಎಂದು ಹಾಡುವ ನಮ್ಮ ಕನ್ನಡ ಕಂದಮ್ಮಗಳ ಹೃದಯಗಳಲ್ಲಿ, ಕನಸುಗಳಲ್ಲಿ ಪುಣ್ಯ ಭೂಮಿ ಭಾರತ ಮತ್ತು ಕನ್ನಡ ನಾಡಿನ ಸಂಸ್ಕೃತಿಯನ್ನು ಬಿತ್ತುವ ಭಾಷೆ, ಕಲೆ, ಸಂಗೀತ, ನೃತ್ಯ, ಸಾಹಿತ್ಯ, ಇತಿಹಾಸ ಎಲ್ಲವನ್ನು ಒಳಗೊಂಡಿರುವ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸೋಣ.
ಜೊತೆಗೆ 52 ವರ್ಷದ ಇತಿಹಾಸವಿರುವ ನಮ್ಮ ಕನ್ನಡ ಕೂಟದ ಸಸಿಯನ್ನು ನೆಟ್ಟು ನೀರೆರೆದ ಹಿರಿಯರನ್ನು ಮತ್ತೆ ಮುಂದೆಲೆಗೆ ತಂದು, ಅವರಿಂದ ನಾವೆಲ್ಲರೂ ಪ್ರೋತ್ಸಾಹಿತರಾಗೋಣ.
ಇಂತಹ ಕನಸುಗಳನ್ನು ಹೊತ್ತು, ನಮ್ಮ ೨೦೨೫ರ ಕನ್ನಡ ಕೂಟದ ಪ್ರಧಾನ ವಸ್ತುವಾಗಿ “ಬೇರು ಸೇರು - Connect to our roots" ಎಂಬುದನ್ನು ಆರಿಸಿಕೊಂಡಿದ್ದೇವೆ. ಬೇರು ಸೇರು ವಿಷಯದ ಮೇಲೆ ಕನ್ನಡದಲ್ಲಿ “ಕವನ/ಪದ್ಯ” ರಚನೆಯ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ.
- ಕವನ ಸ್ಪರ್ಧೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸದಸ್ಯರಿಗೆ ಮಾತ್ರ.
- ಪದ್ಯವು ಕನ್ನಡದಲ್ಲಿ 20 ಸಾಲುಗಳಿಗೆ ಮೀರದಂತೆ ಬರೆಯತಕ್ಕದ್ದು.
- “ಬೇರು-ಸೇರು ವಿಷಯದ ಕುರಿತಾಗಿರಬೇಕು, ಗೇಯವಾದ ಅಥವಾ ಸುಲಭವಾಗಿ ಹಾಡಲು ಸಾಧ್ಯವಾಗುವಂತಿದ್ದರೆ ಒಳ್ಳೆಯದು.
- ಕವನವು ನಿಮ್ಮ ಸ್ವರಚಿತವಾಗಿದ್ದು, ಈ ವರೆಗೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು.
- ಕವನ/ಪದ್ಯವನ್ನು ಜನವರಿ 19ರ ಒಳಗಾಗಿ [email protected] ಗೆ ಕಳುಹಿಸಿ.
ಸ್ಪರ್ಧೆಯಲ್ಲಿ ಆಯ್ಕೆಯಾದ ಪದ್ಯವನ್ನು ಅನುಭವಿ ಕಲಾವಿದರಿಂದ ಹಿಮ್ಮೇಳ ಸಮೇತ ಹಾಡಿಸಿ ೨೦೨೫ರ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುವುದು.
We are hosting Poetry competition for our 2025 theme “ಬೇರು-ಸೇರು - Connect to our roots".
- Competition is open only for KKNC members.
- The poem should be written in Kannada and must not exceed 20 lines.
- The poem should capture the essence and convey the spirit of the theme “ಬೇರು-ಸೇರು” (Beru-Seru).
- The poem must be your original creation and should not have been published in any form of media.
Please send your entries to [email protected] by January 19th.
Accomplished artists will compose music and perform it as a theme song at various Kannada Koota events throughout the year
ಸಂಕ್ರಾಂತಿ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ! ಕಾರ್ಯಕ್ರಮ 2:30ಕ್ಕೆ ಪ್ರಾರಂಭವಾಗಲಿದೆ.
Chakrafonics
Jan 19 2025, Spangenberg theater, Gunn High School, Palo Alto ನಲ್ಲಿ ನೆಡೆಯುವ ಮೊದಲ ಕಾರ್ಯಕ್ರಮಕ್ಕೆ “Chakrafonics” band ಬರುತ್ತಿದೆ.
ಈಗಲೇ ನಿಮ್ಮ ಕೆ ಕೆ ಏನ್ ಸಿ ಸದಸ್ಯತ್ವವನ್ನು ನವೀಕರಿಸಿ/ಸ್ವೀಕರಿಸಿ.
Family Membership
Individual Membership
Chakrafonics band is coming to enthrall us during the Sankranthi event on Jan 19, 2025, at Gunn High School, Palo Alto. Please block your calendars for the event and do not forget to renew or become a member now!
Family Membership
Individual Membership
ತೊಗಲುಗೊಂಬೆಯಾಟ
ಕನ್ನಡ ಬಾಂಧವರೇ,
ಈ ವರ್ಷದ ಶೀರ್ಷಿಕೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ "ಬೇರು ಸೇರು". ಸಂಕ್ರಾಂತಿಯನ್ನು ಜಾನಪದ ಹಾಗು ಸೂರ್ಯ ಎನ್ನುವ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ.
“ತೊಗಲುಗೊಂಬೆ” ಕರ್ನಾಟಕದ ಪ್ರಸಿದ್ದ ಜಾನಪದ ಕಲೆ. ಈ ಕಲೆಯನ್ನು ದೇಶ ವಿದೇಶಗಳಲ್ಲಿ ಜನಪ್ರಿಯವಾಗಿಸಿರುವ ಶ್ರೀ ಗುಂಡುರಾಜು, "ಸೈರಂಧ್ರಿ ಜಾಣ್ಮೆ" (ಕೀಚಕ ವಧೆ) ಕಥಾನಾಟಕವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಬನ್ನಿ ನಿಮ್ಮವರನ್ನೆಲ್ಲ ಕರೆತನ್ನಿ!
The main theme of this year is "Beru- Seru" connect to the roots. Shadow puppetry is one of the forms of folk arts of India. We are bringing you a slice of Mahabharata from the renowned artist Shri Gunduraju.
Block your calendars and bring your families!
KKNC 2025 Membership
2024ನ್ನು ಬೀಳ್ಕೊಡುವ ಸಮಯ ಬಂದೇ ಬಿಟ್ಟಿತು. ಹಾಗೆಯೇ 2025ರ ಆಗಮನಕ್ಕೆ ಸಿದ್ಧತೆಯೂ ನಡೆದಿರಬಹುದಲ್ಲವೇ? ಹೊಸ ವರ್ಷ ಅಂದತಕ್ಷಣ ಏನೆಲ್ಲ ಮಾಡಬೇಕು ಎಂಬ ಕೆಲಸದ ಪಟ್ಟಿಯೂ ತಯಾರಾಗಿರಬಹುದಲ್ಲವೇ? ಆ ಪಟ್ಟಿಯಲ್ಲಿ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸುವ ಅಥವಾ ಸದಸ್ಯತ್ವವನ್ನು ಸ್ವೀಕರಿಸುವ ಕಾರ್ಯವನ್ನು ಸೇರಿಸಿದ್ದೀರಾ? ಇದೊಂದು ಕಾರ್ಯವನ್ನು ಮಾಡಲು 2025 ಜನವರಿ 1 ನ್ನು ಕಾಯಬೇಕಾಗಿಲ್ಲ, ಈಗಲೇ ನಿಮ್ಮ ಕೆ ಕೆ ಏನ್ ಸಿ ಸದಸ್ಯತ್ವವನ್ನು ನವೀಕರಿಸಿ/ ಸ್ವೀಕರಿಸಿ. 2025ರ ಕೆ ಕೆ ಏನ್ ಸಿ ಸದಸ್ಯತ್ವ ತೆರೆದಿದೆ.
ನಿರೂಪಣೆ ಅಂದ ತಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಹೆಸರು ಅಪರ್ಣ ವಸ್ತಾರೆ ಅಲ್ಲವೆ? ಮನಸ್ಸಿಗೆ ತಂಪನ್ನು ಸೂಸುವ ಅವರ ಇಂಪಾದ ಧ್ವನಿ, ಭಾಷಾ ಪ್ರಾವೀಣ್ಯತೆ ಹಾಗು ಅವರ ಮಾತನಾಡುವ ಶೈಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿರೂಪಣೆ ಮಾಡುವುದು ಒಂದು ಕಲೆ.
ಈ ವರ್ಷದ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ನಿಮಗೆ ನಿರೂಪಣೆ ಮಾಡಲು ಆಸಕ್ತಿ ಇದ್ದಲ್ಲಿ ನೋಂದಾಯಿಸಿಕೊಳ್ಳಿ.
Aparna vastare has been a household name in Karnataka for emcee skills, her hold over kannada language and her voice modulation. Emceeing is an important part of any event.
We are looking for individuals who are interested to be part of KKNC events please register here
KKNC 2025ರ ಪ್ರಮುಖ ವಿಷಯ “ಬೇರು-ಸೇರು”. ಅದರ ಅಡಿಯಲ್ಲಿ “ಅಷ್ಟಮಿ, ಕಲಾ ನವಮಿ, ಪಾಕ-ಪೌರ್ಣಿಮೆ” ಎಂಬ ಕಾರ್ಯಕ್ರಮವನ್ನು ವರ್ಷವಿಡೀ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಿದ್ದೇವೆ.ನಮ್ಮ ಕನ್ನಡ ಕೂಟದ ಸದಸ್ಯರ ಪ್ರತಿಭೆಗಳ ಪ್ರದರ್ಶನ ಇದರ ಗುರಿ.
- ಪ್ರತಿ ಶುಕ್ಲ ಪಕ್ಷದ ಅಷ್ಟಮಿಯಂದು ಹಾಡು
- ಕೃಷ್ಣ ಪಕ್ಷದ ನವಮಿಯಂದು ಚಿತ್ರ
- ಪ್ರತಿ ಹುಣ್ಣಿಮೆಯಂದು ಅಡುಗೆಯ ವೀಡಿಯೋವನ್ನು ಪ್ರಕಟಿಸುತ್ತೇವೆ.
ತಿಂಗಳಿಗೊಂದರಂತೆ ಹೊಸ ವಿಷಯವನ್ನು ಕೊಡಲಾಗುವುದು, ಅದಕ್ಕೆ ಅನುಗುಣವಾಗಿ ಕೂಟದ ಸದಸ್ಯರು ತಮ್ಮ ಹಾಡಿನ ವೀಡಿಯೋ ಅಥವಾ ತಾವು ಬರೆದ ಚಿತ್ರದ ಛಾಯಚಿತ್ರವನ್ನು ಕಳುಹಿಸಬಹುದು.
ಹಾಗೆಯೇ ನಿಮ್ಮ ಮನೆಗಳಲ್ಲಿ ಮಾಡುವ ವಿಶೇಷ ಭಾರತ/ಕರ್ನಾಟಕದ ಸಾಂಪ್ರದಾಯಕ ತಿಂಡಿ-ತಿನುಸುಗಳನ್ನು ಕನ್ನಡ ಸ್ನೇಹಿತರೊಡನೆ ಹಂಚಿಕೊಳ್ಳಲು ಇದೊಂದು ಸದವಕಾಶ.
ಕನ್ನಡ ಕೂಟದ ಈ ಉಪಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತೀರಿ ಎಂಬ ಆಶಯ ನಮ್ಮದು.
"Beru-seru - Connect to Your Roots" is the theme for KKNC 2025, and to celebrate this, we are launching a year-long initiative called “Gaana-AshTami, Kalaa-Navami, Paaka-PourNime” on social media.
This online platform will offer our Kannada Koota members the opportunity to showcase their diverse talents. Each month, we will feature:
- A song on every Shukla-Paksha Ashtami
- An artwork on every Krishna-Paksha Navami
- A cooking video on every Full Moon day
Each month will introduce a new theme for music and art submissions. We encourage you to align your contributions with the given theme.
Additionally, we invite you to share your culinary skills by preparing traditional Karnataka dishes and sharing the video and recipes with your fellow Kannadigas.
We look forward to seeing enthusiastic participation from all!
ನಮ್ಮ ಪ್ರೀತಿಯ ಯುವಜನತೆ,
ನಮ್ಮ ಸಮುದಾಯದ ಯುವಜನರನ್ನು ಅಂದರೆ ಕನ್ನಡದೂಟ ಭವಿಷ್ಯದ ನಾಯಕರನ್ನು ಕನ್ನಡಕೂಟದ ೨೦೨೫ ರ youth Forum ಸೇರಲು ಆಹ್ವಾನಿಸುತ್ತಿದ್ದೇವೆ. ಬನ್ನಿ ನಿಮ್ಮ ಹೊಸ ಆಲೋಚನೆಗಳು, ಅದ್ಯಮ್ಯ ಉತ್ಸಾಹ, ಅಮಿತ ಕಾರ್ಯಕ್ರಮಗಳನ್ನು ‘ಬೇರು ಸೇರು’ ಎನ್ನುವ ಪ್ರಧಾನ ವಸ್ತು(Theme)ವಿನ ಅಡಿಯಲ್ಲಿ ನಾವು ನೀವೆಲ್ಲ ಸೇರಿ ಕಾರ್ಯಗತಗೊಳಿಸೋಣ. ಆಸಕ್ತಿಯುಳ್ಳ ೯ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳೆಲ್ಲ ಈ ಫಾರ್ಮ್ ತುಂಬಿ!
Calling all youngsters!
Join KKNC's Youth Committee and become part of an awesome team that's passionate about giving back!
As a member, you'll get to:
- Organize epic events and activities
- Help plan charitable initiatives that make a real impact
- Meet new friends who share your passions
- Develop skills that will help you become a future leader!
Plus, your time with us can count towards your school's volunteer hour requirements!
We welcome all youngsters aged 9 and above to join the fun! Let's build a stronger, more compassionate community together!
Please fill the google form to enroll in the Youth Forum
ತಮಗೆಲ್ಲ ಪ್ರೀತಿಯ ಕರೆಯೋಲೆ!!
ಪ್ರೀತಿಯ ಕನ್ನಡ ಬಾಂಧವರೇ,
ಸುಂದರ ನೆನಪುಗಳನ್ನು ಚಿತ್ರಿಸಿ ಹಳೆಯ ವರ್ಷವು ಮರೆಯಾಗುತ್ತಿದೆ. ಹಾಗೆಯೇ, ಇನ್ನೂ ಹೇಳದ ಕಥೆಗಳು, ಅರಳದ ಕನಸುಗಳು, ಬಣ್ಣ ತುಂಬಿರದ ಚಿತ್ರಗಳನ್ನೊಳಗೊಂಡ ಹೊಸವರ್ಷವು ಬರುತ್ತಿದೆ. ಮುಂಬರುವ ವರ್ಷದಲ್ಲಿ ತೆರೆಯುವ ಹೊಸ ಪುಟಗಳು ಸಂತೋಷದ, ಸಿಹಿಯಾದ, ಮಧುರವಾದ ಅನುಭವಗಳಿಂದ ತುಂಬಿರಲಿ. ಸಮೃದ್ಧಿ, ಸದೃಢ ಆರೋಗ್ಯ ತಮ್ಮೆಲ್ಲರದಾಗಿರಲಿ ಎಂದು ಆಶಿಸುತ್ತೇನೆ.
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಇಂದು ೫೨ನೇ ವರ್ಷಕ್ಕೆ ಕಾಲಿಡುತ್ತಿರುವ, ಪ್ರೌಢ ಸಂಸ್ಥೆ. ಸುಮಾರು ೧೫೦೦ಕ್ಕಿಂತ ಹೆಚ್ಚು ಕನ್ನಡ ಕುಟಂಬಗಳನ್ನು ಒಳಗೊಂಡಿರುವ ಜೀವನದಿ. ಈ ಸಂಸ್ಥೆ ಇನ್ನು ಸಮೃದ್ಧವಾಗಿ ಬೆಳದು ಭವಿಷ್ಯದಲ್ಲಿ ಸುಸ್ಥಿರವಾಗಿ ನಿಂತು ಮುಂದುವರಿಯಬೇಕು ಎಂದರೆ ಎಲ್ಲ ಕನ್ನಡಿಗರೂ ಒಮ್ಮನಸ್ಸಿನಿಂದ ಸಂಸ್ಥೆಯ ಸದಸ್ಯತ್ವವನ್ನು ಪಡೆದು, ಸ್ವಯಂ ಸೇವಕರಾಗಿ, ಈ ಸಂಸ್ಥೆಯನ್ನು ಬೆಳೆಸುವ ಸಂಕಲ್ಪವನ್ನು ಮಾಡಬೇಕು.
ಈಗಾಗಲೇ ನನ್ನ ಮನದ ಭಾವನೆಯನ್ನು ಅರಿತು, ನನ್ನೊಂದಿಗೆ ಕೈ ಜೋಡಿಸುವ ಸಂಕಲ್ಪ ಮಾಡಿರುವ ೨೦೨೫ ರ ಕಾರ್ಯಕಾರಿ ಸಮಿತಿಯನ್ನು ನಿಮಗೆಲ್ಲಾ ಈ ಮೂಲಕ ಪರಿಚಯಿಸುವ ಹೆಮ್ಮೆ ನನ್ನದು.
೨೦೨೫ರ ಕಾರ್ಯಕಾರಿ ಸಮಿತಿ:
Vice President — ಕಿರಣ್ ದೇಸಾಯಿ
Treasurer — ಶ್ರೀಧರ್ ಆಳ್ವ
Entertainment Chair — ಸಂಸ್ಕೃತಿ ಸಮೀರ್
General Secretary — ಅರುಣಾ ಆಚಾರ್ಯ
Joint Secretary — ಕಾವ್ಯ ರಾಮಚಂದ್ರ
Fundraising & Marketing Chair — ಗಿರೀಶ್ ಹಂದಿಗೋಳ್
Food Service Chair — ಭಾರ್ಗವ್ ಎ. ಎಸ್
Membership Chair — ಲಕ್ಷ್ಮೀ ಪುರಾಣಿಕ್
ತಾವು ಕನ್ನಡ ಕೂಟದ ಸದಸ್ಯತ್ವವನ್ನು ಪಡೆದು, ನಮ್ಮೊಂದಿಗೆ ಕೈ ಜೋಡಿಸಿ!
ತಮಗೆಲ್ಲರಿಗೂ ಹೊಸವರ್ಷ ೨೦೨೫ರ ಹಾರ್ದಿಕ ಶುಭಾಶಯಗಳು!!
ವಸುಧಾ ಹೆಗಡೆ
ಅಧ್ಯಕ್ಷರು - ೨೦೨೫
ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾ
ಸ್ರಜನಶೀಲ ಕನ್ನಡ ಭಾಂದವರೇ,
ಈ ವರ್ಷದ " ಬೇರು ಸೇರು " ಎಂಬ ಪ್ರಧಾನ ವಸ್ತುವಿಗೆ ಅನುಗುಣವಾಗಿ ಮನೋರಂಜನಾ ಸಮಿತಿಯು ಮಹಿಳಾ ಪರ್ವ ಎಂಬ ಸರಣಿಯನ್ನು ಹಮ್ಮಿಕೊಂಡಿದೆ. ಅನೇಕ ಸಾಧಕಿಯರ ಸಾಧನೆಯನ್ನು ಕನ್ನಡ ಕೂಟದ ವೇದಿಕೆಯ ಮೇಲೆ ಸಂಭ್ರಮಿಸುವುದು ನಮ್ಮ ಈ ಸರಣಿಯ ಉದ್ದೇಶ. ಈ ಸರಣಿಯ ಪ್ರಥಮ ಕಾರ್ಯಕ್ರಮವನ್ನು ಸಂಕ್ರಾಂತಿಯಲ್ಲಿ ಪ್ರದರ್ಶಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 12 ವರ್ಷಕ್ಕೂ ಮೇಲ್ಪಟ್ಟ ಮಕ್ಕಳು ಮತ್ತು ವಯಸ್ಕರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಆಸಕ್ತಿ ಇದಲ್ಲಿ ಇಂದೇ ನೋಂದಾಯಿಸಿ. ಕೊನೆಯ ದಿನಾಂಕ January 6, 2025.
In line with this year's theme, "ಬೇರು ಸೇರು" the Entertainment Committee is organizing a "ಮಹಿಳಾ ಪರ್ವ(Celebration of womanhood) series. The purpose of this series is to celebrate the achievements of many successful women on the Kannada Koota platform. The first event in this series will be showcased during Sankranti. We invite dancers above 12 years and adults to participate in this event. Please register your interest today. Last date to register: January 6, 2025.
ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ।। ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ।
ಸ್ನೇಹಿತರೆ, January 19 ,2025 ರಂದು 2025 ರ ಸಮಿತಿ ಕನ್ನಡ ಕೂಟದ ಸಂಕ್ರಾಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವರ್ಷದ "ಬೇರು ಸೇರು" ಎಂಬ ಪ್ರಧಾನ ವಸ್ತುವಿಗೆ ಅನುಗುಣವಾಗಿ ಮೊದಲನೆ ಕಾರ್ಯಕ್ರಮವನ್ನು "ಜಾನಪದ ಹಾಗು ಸೂರ್ಯ" ಎಂಬ ವಿಷಯದ ಆಧಾರದ ಮೇಲೆ ರೂಪಿಸಲು ಯೋಜಿಸಲಾಗಿದೆ. ಆಸಕ್ತಿಯುಳ್ಳ ನಿರ್ದೇಶಕರು ಈ ಮೇಲಿನ ವಿಷಯಕ್ಕೆ ಪೂರಕವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ನೋಂದಾಯಿಸಲು 2025ರ ಮನರಂಜನಾ ಸಮಿತಿ ಆಹ್ವಾನಿಸುತ್ತಿದೆ. ತಮ್ಮ ಕಾರ್ಯಕ್ರಮಗಳನ್ನು ನೋಂದಾಯಿಸಲು ಕೊನೆಯ ದಿನಾಂಕ January 6, 2025
ತಮ್ಮ ಕಾರ್ಯಕ್ರಮವನ್ನು ಇಲ್ಲಿ ನೊಂದಾಯಿಸಿಕೊಳ್ಳಿ.
Dear Friends,
The KKNC Team 2025 is thrilled to announce our first event of the year: a vibrant celebration of Sankranthi on January 19, 2025.
In keeping with our overarching theme for the year, "ಬೇರು-ಸೇರು - Connect to Our Roots," we have chosen "Janapada and Sun" as the central theme for this joyous occasion. We warmly invite all talented directors in the Bay Area to submit the programs that creatively align with this theme. Please submit your program proposals by January 6, 2025by submitting here.
ಬೇರು ಸೇರು - Connect to our roots
“ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ... ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ...." ಎಂದು ಹಾಡುವ ನಮ್ಮ ಕನ್ನಡ ಕಂದಮ್ಮಗಳ ಹೃದಯಗಳಲ್ಲಿ, ಕನಸುಗಳಲ್ಲಿ ಪುಣ್ಯ ಭೂಮಿ ಭಾರತ ಮತ್ತು ಕನ್ನಡ ನಾಡಿನ ಸಂಸ್ಕೃತಿಯನ್ನು ಬಿತ್ತುವ ಭಾಷೆ, ಕಲೆ, ಸಂಗೀತ, ನೃತ್ಯ, ಸಾಹಿತ್ಯ, ಇತಿಹಾಸ ಎಲ್ಲವನ್ನು ಒಳಗೊಂಡಿರುವ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸೋಣ.
ಜೊತೆಗೆ 52 ವರ್ಷದ ಇತಿಹಾಸವಿರುವ ನಮ್ಮ ಕನ್ನಡ ಕೂಟದ ಸಸಿಯನ್ನು ನೆಟ್ಟು ನೀರೆರೆದ ಹಿರಿಯರನ್ನು ಮತ್ತೆ ಮುಂದೆಲೆಗೆ ತಂದು, ಅವರಿಂದ ನಾವೆಲ್ಲರೂ ಪ್ರೋತ್ಸಾಹಿತರಾಗೋಣ.
ಇಂತಹ ಕನಸುಗಳನ್ನು ಹೊತ್ತು, ನಮ್ಮ ೨೦೨೫ರ ಕನ್ನಡ ಕೂಟದ ಪ್ರಧಾನ ವಸ್ತುವಾಗಿ “ಬೇರು ಸೇರು - Connect to our roots” ಎಂಬುದನ್ನು ಆರಿಸಿಕೊಂಡಿದ್ದೇವೆ. ಬೇರು ಸೇರು ವಿಷಯದ ಮೇಲೆ ಕನ್ನಡದಲ್ಲಿ ಕವನ/ಪದ್ಯ ರಚನೆಯ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ.
- ಪದ್ಯವು ಕನ್ನಡದಲ್ಲಿ 20 ಸಾಲುಗಳಿಗೆ ಮೀರದಂತೆ ಬರೆಯತಕ್ಕದ್ದು
- “ಬೇರು-ಸೇರು ವಿಷಯದ ಕುರಿತಾಗಿರಬೇಕು, ಗೇಯವಾದ ಅಥವಾ ಸುಲಭವಾಗಿ ಹಾಡಲು ಸಾಧ್ಯವಾಗುವಂತಿದ್ದರೆ ಒಳ್ಳೆಯದು
- ಕವನವು ನಿಮ್ಮ ಸ್ವರಚಿತವಾಗಿದ್ದು, ಈ ವರೆಗೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು
- ಕವನ/ಪದ್ಯವನ್ನು ಜನವರಿ 6ರ ಒಳಗಾಗಿ [email protected] ಗೆ ಕಳುಹಿಸಿ.
ಸ್ಪರ್ಧೆಯಲ್ಲಿ ಆಯ್ಕೆಯಾದ ಪದ್ಯವನ್ನು ಅನುಭವಿ ಕಲಾವಿದರಿಂದ ಹಿಮ್ಮೇಳ ಸಮೇತ ಹಾಡಿಸಿ ೨೦೨೫ರ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುವುದು.
We are hosting Poetry competition for our 2025 theme “ಬೇರು-ಸೇರು - Connect to our roots”
- The poem should be written in Kannada and must not exceed 20 lines
- The poem should capture the essence and convey the spirit of the theme “ಬೇರು-ಸೇರು” (Beru-Seru).
- The poem must be your original creation and should not have been published in any form of media.
- Please send your entries to [email protected] by January 6th.
Accomplished artists will compose music and perform it as a theme song at various Kannada Koota events throughout the year.
ಕನ್ನಡ ಬಾಂಧವರೇ,
2024ನ್ನು ಬೀಳ್ಕೊಡುವ ಸಮಯ ಬಂದೇ ಬಿಟ್ಟಿತು. ಹಾಗೆಯೇ 2025ರ ಆಗಮನಕ್ಕೆ ಸಿದ್ಧತೆಯೂ ನಡೆದಿರಬಹುದಲ್ಲವೇ? ಹೊಸ ವರ್ಷ ಅಂದತಕ್ಷಣ ಏನೆಲ್ಲ ಮಾಡಬೇಕು ಎಂಬ ಕೆಲಸದ ಪಟ್ಟಿಯೂ ತಯಾರಾಗಿರಬಹುದಲ್ಲವೇ? ಆ ಪಟ್ಟಿಯಲ್ಲಿ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸುವ ಅಥವಾ ಸದಸ್ಯತ್ವವನ್ನು ಸ್ವೀಕರಿಸುವ ಕಾರ್ಯವನ್ನು ಸೇರಿಸಿದ್ದೀರಾ? ಇದೊಂದು ಕಾರ್ಯವನ್ನು ಮಾಡಲು 2025 ಜನವರಿ 1 ನ್ನು ಕಾಯಬೇಕಾಗಿಲ್ಲ, ಈಗಲೇ ನಿಮ್ಮ ಕೆ ಕೆ ಏನ್ ಸಿ ಸದಸ್ಯತ್ವವನ್ನು ನವೀಕರಿಸಿ/ ಸ್ವೀಕರಿಸಿ. 2025ರ ಕೆ ಕೆ ಏನ್ ಸಿ ಸದಸ್ಯತ್ವ ತೆರೆದಿದೆ.
ಪ್ರೀತಿಯ ಕನ್ನಡ ಬಾಂಧವರೇ,
ನಮ್ಮ ನಾಡನ್ನು ಸದಾ ನೆನಪಿಸುವ, ನಮ್ಮ ಮನವನ್ನು ತಂಪಾಗಿಸುವ, ನಮ್ಮದೆಂಬ ಭಾವನೆಯನ್ನು ಉಂಟುಮಾಡುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮತ್ತೊಂದು ಹೆಜ್ಜೆಯನ್ನಿಡಲು ತಯಾರಾಗುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರಾಂತ್ಯದ ಕನ್ನಡಿಗರೆಲ್ಲರೂ ಒಟ್ಟಾಗಿ ನಿಂತು ಕೈಜೋಡಿಸಿದರೆ, ಕನ್ನಡ ಕೂಟದ ಮುಂದಿನ ವರ್ಷ ಎಲ್ಲರ ಮನದಲ್ಲಿ ಸುಂದರ ನೆನಪಾಗಿ ಉಳಿಯಲು ಸಾಧ್ಯ. ತಮಗೆ ಆಸಕ್ತಿಯಿದ್ದ ಕ್ಷೇತ್ರದಲ್ಲಿ ಸ್ವಯಂಸೇವಕರಾಗಿ ನಮಗೆ ಸಹಾಯ ನೀಡಿ. ನೀವು ಈ ಗೂಗಲ್ ಫಾರ್ಮ್ ತುಂಬಿ 2025 ರ ತಂಡಕ್ಕೆ ಸೇರಬಹುದು. ನಮ್ಮೊಂದಿಗೆ ಕೈಜೋಡಿಸಿ ಎಂದು 2025 ರ ಕಾರ್ಯಕಾರಿ ಸಮಿತಿ ತಮ್ಮೆಲ್ಲರನ್ನು ಆಹ್ವಾನಿಸುತ್ತಿದೆ.
ಕನ್ನಡ ಕೂಟದ ಪ್ರೀತಿಯ ಸದಸ್ಯರೇ,
ಇನ್ನೇನು ಕನ್ನಡ ಕೂಟದ ಹೊಸವರ್ಷದ ಕಾರ್ಯಕಲಾಪಗಳು ಪ್ರಾರಂಭವಾಗಬೇಕು. ಕಾರ್ಯಕ್ರಮಗಳಿಗೆ ತಯಾರಿ ನಡೆಯಬೇಕು. ಅದೆಲ್ಲಕ್ಕಿಂತ ಮುಂಚೆ ನಮ್ಮ ನಿಮ್ಮೆಲ್ಲರ ಪರಿಚಯವಾಗಬೇಕು. ಎಲ್ಲರೂ 2025ರ ರೂಪರೇಷೆಗಳನ್ನು ಅರಿಯಬೇಕು. ಈ ಎಲ್ಲಾ ಕಾರಣಕ್ಕಾಗಿ ನಿಮ್ಮನ್ನೆಲ್ಲ ನಮ್ಮ ಪ್ರಾರಂಭಿಕ(Kick Off) ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.
ದಿನಾಂಕ: ರವಿವಾರ, ಡಿಸೆಂಬರ್ 15, 2024
ಸ್ಥಳ: Sewa International Bay Area, 691 S Milpitas Blvd, Milpitas, CA 95035
ಸಮಯ: 4PM
Dear Kannada Koota Members,
As we approach 2025, it’s time to initiate Kannada Koota’s New Year activities. Preparations for upcoming programs should be set in motion. To foster a strong community and align our efforts, we invite you to our inaugural event. This gathering will provide an opportunity for us to connect, and set the stage for a successful year ahead.
Date: Sunday, December 15, 2024
Venue: Sewa International Bay Area, 691 S Milpitas Blvd, Milpitas, CA 95035
Time: : 4PM